Tuesday, April 24, 2012

"ಮುಂಗಾರು ಮಳೆ... "

ಹೇ ವರುಣನೆ!!!
ನಿನ್ನಲ್ಲಿ ಹೀಗೊಂದು ಮೊರೆ ....
ಪೋಣಿಸು ಮೇಘಗಳ ಮಾಲೆಯನ್ನು
ಅಲಂಕರಿಸು ಭೂರಮೆಯ ಕೊರಳನ್ನು ...

ತೀರದಾಗಿದೆ ಬರದ ಬವಣೆ
ಸಹಿಸಲಾಗದಾಗಿದೆ ಬೇಸಿಗೆಯ ಬೇನೆ
ಸಕಲ ಜೀವರಾಶಿಗಳು ನಿನ್ನಾಗಮನದ ನಿರೀಕ್ಷೆಯಲ್ಲಿವೆ ,
ಹರಸು ಸಕಲ ಚರಾಚರಗಳನ್ನು...
ಸುರಿಸು ಮುಂಗಾರು ಮಳೆಯನ್ನು...
ತುಂಬಿಸು ಬರಿದಾಗಿರುವ ನದಿ-ಹಳ್ಳ-ತೊರೆಗಳ ಒಡಲನ್ನು....

ನಿನ್ನಿಂದಲೇ ಮನಸ್ಸಿಗೆ ಉಲ್ಲಾಸ
ನಯನಗಳಿಗೆ ಹಸಿರಿನ ಸಂತಸ
ಆರ್ಭಟ ನೆಡಸದಿರು ಅತಿವೃಷ್ಟಿಯಾಗಿ
ಶಪಿಸದಿರು ಅನಾವೃಷ್ಟಿಯಾಗಿ
ಸುರಿಸು ಸರಿ ಪ್ರಮಾಣದ ಮಳೆ...
ತರಿಸು ಸುಗ್ಗಿಯ ಹೊಳೆ ....   

1 comment:

  1. ಆಹಾ..ಎಂಥ ಸುಂದರವಾದ ಆಹ್ವಾನ ವರುಣನಿಗೆ :)
    ನಮ್ಮ ವಿನಯ ನಲ್ಲಿ ಇಂಥ ಒಳ್ಳೆಯ ಕವಿಯೂ ಇಹನೆಂದು ಅರಿಯೆನು :):)

    ReplyDelete