ಹೇ ವರುಣನೆ!!!
ನಿನ್ನಲ್ಲಿ ಹೀಗೊಂದು ಮೊರೆ ....
ಪೋಣಿಸು ಮೇಘಗಳ ಮಾಲೆಯನ್ನು
ಅಲಂಕರಿಸು ಭೂರಮೆಯ ಕೊರಳನ್ನು ...
ತೀರದಾಗಿದೆ ಬರದ ಬವಣೆ
ಸಹಿಸಲಾಗದಾಗಿದೆ ಬೇಸಿಗೆಯ ಬೇನೆ
ಸಕಲ ಜೀವರಾಶಿಗಳು ನಿನ್ನಾಗಮನದ ನಿರೀಕ್ಷೆಯಲ್ಲಿವೆ ,
ಹರಸು ಸಕಲ ಚರಾಚರಗಳನ್ನು...
ಸುರಿಸು ಮುಂಗಾರು ಮಳೆಯನ್ನು...
ತುಂಬಿಸು ಬರಿದಾಗಿರುವ ನದಿ-ಹಳ್ಳ-ತೊರೆಗಳ ಒಡಲನ್ನು....
ನಿನ್ನಿಂದಲೇ ಮನಸ್ಸಿಗೆ ಉಲ್ಲಾಸ
ನಯನಗಳಿಗೆ ಹಸಿರಿನ ಸಂತಸ
ಆರ್ಭಟ ನೆಡಸದಿರು ಅತಿವೃಷ್ಟಿಯಾಗಿ
ಶಪಿಸದಿರು ಅನಾವೃಷ್ಟಿಯಾಗಿ
ಸುರಿಸು ಸರಿ ಪ್ರಮಾಣದ ಮಳೆ...
ತರಿಸು ಸುಗ್ಗಿಯ ಹೊಳೆ ....
ನಿನ್ನಲ್ಲಿ ಹೀಗೊಂದು ಮೊರೆ ....
ಪೋಣಿಸು ಮೇಘಗಳ ಮಾಲೆಯನ್ನು
ಅಲಂಕರಿಸು ಭೂರಮೆಯ ಕೊರಳನ್ನು ...
ತೀರದಾಗಿದೆ ಬರದ ಬವಣೆ
ಸಹಿಸಲಾಗದಾಗಿದೆ ಬೇಸಿಗೆಯ ಬೇನೆ
ಸಕಲ ಜೀವರಾಶಿಗಳು ನಿನ್ನಾಗಮನದ ನಿರೀಕ್ಷೆಯಲ್ಲಿವೆ ,
ಹರಸು ಸಕಲ ಚರಾಚರಗಳನ್ನು...
ಸುರಿಸು ಮುಂಗಾರು ಮಳೆಯನ್ನು...
ತುಂಬಿಸು ಬರಿದಾಗಿರುವ ನದಿ-ಹಳ್ಳ-ತೊರೆಗಳ ಒಡಲನ್ನು....
ನಿನ್ನಿಂದಲೇ ಮನಸ್ಸಿಗೆ ಉಲ್ಲಾಸ
ನಯನಗಳಿಗೆ ಹಸಿರಿನ ಸಂತಸ
ಆರ್ಭಟ ನೆಡಸದಿರು ಅತಿವೃಷ್ಟಿಯಾಗಿ
ಶಪಿಸದಿರು ಅನಾವೃಷ್ಟಿಯಾಗಿ
ಸುರಿಸು ಸರಿ ಪ್ರಮಾಣದ ಮಳೆ...
ತರಿಸು ಸುಗ್ಗಿಯ ಹೊಳೆ ....

ಆಹಾ..ಎಂಥ ಸುಂದರವಾದ ಆಹ್ವಾನ ವರುಣನಿಗೆ :)
ReplyDeleteನಮ್ಮ ವಿನಯ ನಲ್ಲಿ ಇಂಥ ಒಳ್ಳೆಯ ಕವಿಯೂ ಇಹನೆಂದು ಅರಿಯೆನು :):)