ಸುಧಾಮೂರ್ತಿಯವರ "ಏರಿಳಿತದ ದಾರಿಯಲ್ಲಿ" ಪುಸ್ತಕದ ಕಥೆ ಎಂಬ ನೆನಪು ...
ಒಬ್ಬ ಧರ್ಮಾತ್ಮ ಯಾವುದೇ ಪ್ರತಿಫಲವನ್ನು ಬಯಸದೆ ಸುಧಾರವರ ಸಮಾಜ ಸೇವೆಗೆ ಸಹಾಯ ಮಾಡುತ್ತಿರುತ್ತಾನೆ.
ಆತ ಕಾಲವಾದ ನಂತರ ಅಧಿಕಾರ ವಹಿಸಿಕೊಳ್ಳುವ ಆತನ ಮಗ ಸುಧಾರವರಿಗೆ ನೀವು ನಮಗೆ ಮೋಸ ಮಾಡುತ್ತಿದ್ದಿರೆಂದು ನಮ್ಮ ಸಹಾಯ ಮುಂದುವರೆಯಬೇಕಾದರೆ ನಮ್ಮ ಕಂಪನಿಯ ಹೆಸರನ್ನು ಜಾಹಿರಾತಿನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸುತ್ತಾನೆ.
ಇಲ್ಲಿ ಏನಾಯಿತೆಂದರೆ "Idelogical shift". ಕಾರ್ಯವೈಖರಿ,ನಿಲುವು ಧೋರಣೆ ಎಲ್ಲವು ಭಿನ್ನ..
ಇದನ್ನು ಇಲ್ಲೇಕೆ ಪ್ರಸ್ತಾಪಿಸಿದೆ ಎಂಬುದು ಕೆಳಗಿನ ಲೇಖನ ಓದಿದ ಮೇಲೆ ತಿಳಿಯುತ್ತದೆ.
ಒಂದು ದಶಕದ ಹಿಂದಿನ ಮಾತು . ಪಟ್ಟಣದ ಸ್ಥಿತಿ ನನಗೆ ಗೊತ್ತಿಲ್ಲ ಆದರೆ ನಾನಿದ್ದ ಹಳ್ಳಿಯಲ್ಲಿ,ಅಲ್ಲಿನ ಕಿರುತೆರೆಯಲ್ಲಿ ಬರುತ್ತಿದದ್ದು ಕೆಲವೇ ಕೆಲವು ಚಾನೆಲ್ ಗಳು.ಅದರಲ್ಲೂ ಆಂಧ್ರದ ಗಡಿಗೆ ಹತ್ತಿರವಿರುವ ನಮಲ್ಲಿ ಕೇವಲ ಕನ್ನಡ,ತೆಲುಗು,ಒಂದೋ ಎರಡೋ ಹಿಂದಿ ಚಾನೆಲ್ ಗಳು (ಡಿ ಡಿ ೧ ಸೇರಿ) ಬರುತ್ತಿದ್ದವು.
ಅದೊಂದು ಭಾನುವಾರವೆಂಬ ನೆನಪು. ಕೇವಲ ಚಂದನ,ಉದಯ ಟಿವಿ ಇದ್ದ ಕನ್ನಡದ ಚಾನೆಲ್ ಗಳ ಪಟ್ಟಿಗೆ ಒಂದು ಹೊಸ ಚಾನೆಲ್ ಸೇರ್ಪಡೆಯಾಗುತ್ತಿತ್ತು. ಹತ್ತು ಗಂಟೆ ಅಥವಾ ಹನ್ನೊಂದು ಗಂಟೆ ಅನಿಸುತ್ತದೆ. ೫ ನಿಮಿಷದ ವಾರ್ತೆಯೊಂದಿಗೆ ಪ್ರಾರಂಭವಾಗಿ,ರಾಜ್ ಅಭಿನಯದ ಗಂಧದ ಗುಡಿ ಚಲಚಿತ್ರವನ್ನು ಪ್ರಸಾರ ಮಾಡಿತ್ತು. ಈ ಚಾನೆಲ್ ತನ್ನ ಉತ್ತಮ ಅಭಿರುಚಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಗೆದ್ದಿತು.
ಈ ಚಾನೆಲ್ ನಲ್ಲಿ ನಾನು ನೋಡಿ ಬೆಳೆದ ಕೆಲವು ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖಿಸುತ್ತಿದೇನೆ.
"ಅನ್ನದಾತ",
"ಅಗ್ರ ರಾಷ್ಟ್ರೀಯ ವಾರ್ತೆ"
(ಪ್ರಭಾವ-ಪಕ್ಷಪಾತವಿಲ್ಲದ ನ್ಯೂಸ್; ಇಂದು ಕನ್ನಡ ಒಂದರಲ್ಲೇ ೫-೬ ನ್ಯೂಸ್ ಚಾನೆಲ್ ಗಳಾಗಿವೆ. ಇವುಗಳಲೆಲ್ಲ ಇರುವ ನ್ಯೂಸ್ ರೀಡರ್ಸ್ ಗಳಲೆಲ್ಲ ಈ ಟಿವಿ ಗರಡಿಯಲ್ಲೇ ಪಳಗಿದವರು),
ಗಾನ ಕೋಗಿಲೆ ಎಸ್ ಪಿ ಬಾಲಸುಬ್ರಮಣ್ಯಂರವರನ್ನು ಕಿರುತೆರೆಗೆ ತಂದ, ವಿನಯ ಪ್ರಸಾದ್ ನಿರೂಪಿಸುತ್ತಿದ್ದ, ಅಂಚೆ ಮೂಲಕ ನಾವು ಕಳುಹಿಸುತ್ತಿದ್ದ ಹಾಡುಗಳನ್ನು ಹಾಡಿಸುತ್ತಾ, ನಮ್ಮ ನೆಲದ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದ "ಎದೆ ತುಂಬಿ ಹಾಡುವೆನು",
ಎಸ್ ಎಲ್ ಭೈರಪ್ಪನವ ಕಾದಂಬರಿ ಆಧಾರಿತ ಧಾರವಾಹಿ "ಗೃಹಭಂಗ",
(ಪ್ರತಿ ಶನಿವಾರ ಸಂಜೆ ಏಳು ಮೂವತಕ್ಕೆ ಪ್ರಸಾರವಾಗುತ್ತಿತ್ತು. ಕಾದಂಬರಿ ಓದುವಾಗ ಇದೆ ಧಾರಾವಾಹಿಯ ಪಾತ್ರಗಳೇ ಕಣ್ಮುಂದೆ ಬರುತ್ತಿದ್ದವು. http://www.youtube.com/watch?v=fDaNNPgQNzs; ಈ ಲಿಂಕ್ ನೋಡಿ, ನಿಮ್ಮ ನೆನಪು ಹಸಿರಾಗಬಹುದು),
ಟಿ ಎನ್ ಸೀತಾರಾಂ ರವರ ಭಾವನೆಗಳ ಬಣ್ಣದ ಚಿತ್ರಣ, ಕುತೂಹಲದ ಕೌತುಕವಾದ "ಮನ್ವಂತರ","ಮುಕ್ತ","ಮುಕ್ತ-ಮುಕ್ತ" ಧಾರಾವಾಹಿಗಳು,
ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ "ಪಾಪ ಪಾಂಡು","ಸಿಲ್ಲಿ ಲಲ್ಲಿ",
ಸಿನಿಮಾ ತಾರೆಯವರುಗಳ ಹಿನ್ನಲೆಯನ್ನು ತೋರಿಸುತ್ತಿದ್ದ "ಆಟೋಗ್ರಾಫ್ ಪ್ಲೀಸ್",
ಜಯಂತ್ ಕಾಯ್ಕಿಣಿ ನಿರೂಪಿಸುತ್ತಿದ್ದ "ರಸ ಋಷಿಗೆ ನಮಸ್ಕಾರ", "ವರಕವಿಗೆ ನಮನ","ಕಡಲ ತೀರ ಭಾರ್ಗವನಿಗೆ ನಮನ",
ಸಿ ಅಶ್ವಥ್ ನೇತೃತ್ವದ "ಕನ್ನಡವೇ ಸತ್ಯ",
ಪ್ರವೀಣ್ ಗೋಡ್ಖಿಂಡಿ ನೇತೃತ್ವದ "ರಾಗ ರಂಜನಿ",
"ಪಂಚ ತಂತ್ರ",
ರವಿ ಬೆಳೆಗೆರೆ ಮುಂದಾಳತ್ವದಲ್ಲಿ ಮೋದಿ ಬರುತ್ತಿದ್ದ "ಎಂದೂ ಮರೆಯದ ಹಾಡು",
ಇಂತಹ ಹತ್ತಾರು ಹಲವಾರು ಕಾರ್ಯಕ್ರಮಗಳ ಕಲಶದಂತಿದ್ದ ಈ ಟಿವಿ ವಾಟಿಕಾ "ವರ್ಷದ ಕನ್ನಡಿಗ"....
ಇಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ನಮಗೆ ನೀಡಿದ್ದ ನಮ್ಮ ಚಾನೆಲ್ ನಲ್ಲಿ ಇಂದು ಎಲ್ಲವೂ "ಬಿಗ್ ಬಾಸ್" ಮಾಯ.
F.D.I ಭಾರತಕ್ಕೆ ಬಂದರೆ ನಮ್ಮ ಚಿಲ್ಲರೆ ವ್ಯಾಪರಿಗಳಿಗಾಗುವ ಗತಿ ಬಿಗ್ ಬಾಸ್ ನಿಂದ ಉಳಿದ ಕಾರ್ಯಕ್ರಮಗಳಿಗಾಗಿದೆ.
ಬೆಳೆದಿರುವ ಸಂವಹನ (Communication) ಕ್ಷೇತ್ರದಲ್ಲಿ ಹೊಸ ಹೊಸ ಚಾನೆಲ್ ಗಳು ನೀಡುತ್ತಿರುವ ಪೈಪೋಟಿಗೆ ಸರಿಯಾದ ಉತ್ತರವೆನನ್ನೋ ಈ ಟಿವಿ ಬಿಗ್ ಬಾಸ್ ನಿಂದ ನೀಡಿದೆ. ಇದರಿಂದ ದೊರೆಯುತ್ತಿರುವುದು ಕೇವಲ ಮನೋರಂಜನೆ. ಒಳಗಿರುವ ಸ್ಪರ್ಧಿಗಳಿಗೆನೋ ತಮನ್ನು ತಾವು ಅರ್ಥ ಮಾಡಿಕೊಳ್ಳಲು, ತಿದ್ದಿ ನಡಿಯುವ ಉತ್ತಮ ಅವಕಾಶ. ನಮಗೆ ನಮ್ಮ ವ್ಯಕ್ತಿತ್ವದ ಅಭಿವೃದ್ದಿಗೆ ಆಗುವ ಪ್ರಯೋಜನ? ಶೂನ್ಯ !!!
ಮೇಲೆ ಹೇಳಿದ ಹಲವಾರು ಕಾರ್ಯಕ್ರಮಗಳಿಂದ ದೊರೆಯುತ್ತಿದ್ದ ಜ್ಞಾನ,ಸೂಕ್ಷ್ಮತೆ,ಸಾಹಿತ್ಯ ಕಲೆ,ಸಂಗೀತ,ಬೆಳೆಯುವ ಮಕ್ಕಳಿಗೆ ನೀಡುತ್ತಿದ್ದ ಅಭಿರುಚಿ,ಸಾಮಾಜಿಕ ಕಳಕಳಿ ಇವೆಲ್ಲವುಕ್ಕೂ ಪೂರ್ಣ ವಿರಾಮ ಬಿದ್ದಂತೆ ಆಗಲ್ಲಿಲ್ಲವೇ.
ಆಗ್ರಾ ರಾಷ್ಟ್ರೀಯ ವಾರ್ತೆಯನ್ನೇ ನಿಲ್ಲಿಸುವಂತಹ ಸ್ಥಿತಿ ಈ ಟಿವಿ ಗೆ ಏಕೆ ಬಂತು. ಲೇಖನದ ಮೊದಲ್ಲಲ್ಲಿ ಹೇಳಿದ Idelogical shift ಏನಾದರು ಚಾನೆಲ್ ನಲ್ಲಿ ಆಗುತ್ತಿದೆಯೇ?
"ಬದಲಾವಣೆ ಜಗದ ನಿಯಮ" ನಿಜ. ಆದರೆ ನಮ್ಮ ಬೇರನ್ನೇ ಅಲುಗಾಡಿಸಲು ನಾವು ಆ ಬದಲಾವಣೆಯ ಬಿರುಗಾಳಿಗೆ ಅವಕಾಶವನ್ನು ಕೊಡಬಾರದಲ್ಲವೇ ?
ನಾನೇನು ಬಿಗ್ ಬಾಸ್ ವಿರೋಧಿಯಲ್ಲ. ನಾನು ಬಿಗ್ ಬಾಸ್ ವೀಕ್ಷಕನೆ.
ಬೇರೆ ಚಾನೆಲ್ ಗಳ ಟಿ ಆರ್ ಪಿ ಇಳಿಸುವಂತಹ ಬಿಗ್-ಬಾಸ್ ಸಹ ಬರಲಿ; ಹಾಗೆಯೇ ಹಳೆಯ ಈ ಟಿವಿ ಮತ್ತೆ ನಮ್ಮ ಚಾನೆಲ್ ಆಗಲಿ.
Saturday, June 22, 2013
Tuesday, June 18, 2013
ಮನಸ್ಸೆಂಬ ಜಿಜ್ಞಾಸೆ
ಪ್ರೀತಿಯ ಸ್ನೇಹಿತರೆ, ಮೊದಲು ಈ ಕೆಳಗಿನ ಹಾಡುಗಳನ್ನು ನೆನಪಿಸಿಕೊಳ್ಳಿ ...
ಮನಸ್ಸೇ ಬದುಕು ನಿನಗಾಗಿ, ಬವಣೆ ನಿನಗಾಗಿ(ಅಮೃತವರ್ಷಿಣಿ )...
ಮನಸ್ಸೇ ಓ ಮನಸ್ಸೇ ಎಂಥ ಮನಸ್ಸೇ(ಚಂದ್ರಮುಖಿ ಪ್ರಾಣಸಖಿ)...
ನಿನ್ನ ನನ್ನ ಮನವೂ ಸೇರಿತು ನನ್ನ ನಿನ್ನ ಹೃದಯ ಹಾಡಿತು(ಭಾಗ್ಯವಂತರು)...
ಮನಸ್ಸೇ ಮನಸ್ಸೇ ಥ್ಯಾಂಕ್ ಯು (ರಂಗ ಎಸ್ ಎಸ್ ಎಲ್ ಸಿ)...
ಈಗ ನನ್ನ ಒಂದು ಸರಳ ಬಾಲಿಶ ಪ್ರಶ್ನೆಗೆ ಉತ್ತರಿಸಿ ...
ಮನೆಯಲ್ಲಿನ ಪುಟ್ಟ ಮಕ್ಕಳು ಕಣ್ಣು ಯಾವುದು, ತಲೆ ಯಾವುದು, ಮೂಗು ಯಾವುದು ಎಂದೊಡನೆ ಹೇಗೆ ಸರಿಯಾಗಿ ದೇಹದ ಅಂಗಾಂಗಗಳನ್ನು ತೋರಿಸುತ್ತಾರೋ ಹಾಗೆ ನೀವು ನಿಮ್ಮ ಮನಸ್ಸು/ಮನ ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳಿ .
ಮನಸ್ಸು ಎಂಬುದು ದೇಹದ ನಿರ್ದಿಷ್ಟ ಅಂಗವಾಗಿಲ್ಲದಿದ್ದರು, "ಇಂದೇಕೋ ಮನಸ್ಸಿಗೆ ಬೇಜಾರು", "ಇಂದು ಮನ ಸಂತೋಷಗೊಂಡಿದೆ" ಎನ್ನುವ ವಾಕ್ಯಗಳನ್ನು ಲೋಕಾಭಿರಾಮವಾಗಿ ಉಪಯೋಗಿಸುವ ನಾವುಗಳು ಸಾಮಾನ್ಯವಾಗಿ ಮನಸ್ಸು ಎಂದಾಕ್ಷಣ ನಮ್ಮ ಹೃದಯದ ಮೇಲೆ ಕೈ ಹಿಡುತ್ತೇವೆ ಅಲ್ಲವೇ ?
ಅದೊಂದು ಶುಕ್ರವಾರ; ಆಫೀಸಿನಲ್ಲಿ ಸ್ನೇಹಿತರ ಜೊತೆ ಊಟ ಮಾಡುವಾಗ "ಮನಸ್ಸಿನ" ವಿಚಾರ ಬಂತು.
ಎಲ್ಲರೂ ಹೃದಯವನ್ನೇ ತೋರಿಸುತ್ತಾರೆ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು.
ಇದ್ದ ಗುಂಪಿನಲ್ಲಿ ಅರ್ಧ ಜನ ಹೃದಯವೆಂದು ಇನರ್ಧ ಜನ ಬುದ್ಧಿಯಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಿರು.
ತಮ್ಮ ನಿಲುವೇ ಗೆಲ್ಲಬೇಕೆಂಬ ಛಲದಲ್ಲಿ ವಾಗ್ಯುದ್ದಕ್ಕೆ ನಿಂತೆವು. ಚರ್ಚೆಯ ಕಾವು ಎಷ್ಟಿತ್ತು ಎಂದರೆ ನನ್ನ ಜಾಗಕ್ಕೆ ಹೋದ ತಕ್ಷಣ ಮಾಡಿದ ಕೆಲಸ ಗೂಗಲ್ ಸರ್ಚ್. ಅಲ್ಲೇ ನಿಜವಾದ ಕೌತುಕದ ವಿಷಯವಿದದ್ದು . ಹೌದು ಗೂಗಲ್ ಕನ್ನಡದ ಮನಸ್ಸು ಎಂಬ ಪದವನ್ನು ಆಂಗ್ಲ ಭಾಷೆಯ ಮೈಂಡ್ ಎಂಬ ಪದಕ್ಕೆ ತರ್ಜುಮೆಗೊಳಿಸುತ್ತದೆ.
ಪ್ರಾಯಶಃ ಚಲನಚಿತ್ರಗಳು,ಯುಗಳ ಗೀತೆಗಳು,ಕವಿಗಳ ಕವನಗಳ ಪ್ರಭಾವವಿರಬಹುದು. ಮನಸ್ಸು ಎಂದೊಡನೆ ನಾನಂತೂ ಹೃದಯವನ್ನೇ ತೋರಿಸುವುದು.
ಆದರೆ ನನ್ನ ಅರಿವಿಗೆ ಬಂದ ಮತ್ತೊಂದು ವಿಷಯವೆಂದರೆ ಮಾನಸಿಕ /ಮಾನಸಿಕ ರೋಗಿ ಎಂದಾಕ್ಷಣ ಬುದ್ದಿಯನ್ನೇ ತೋರಿಸುವ ನಾವು ಪ್ರೀತಿ ಸ್ನೇಹ ಆತ್ಮೀಯ ಭಾವನೆಗಳ ವಿಷಯಕ್ಕೆ ಮಾತ್ರ ಮನಸ್ಸನ್ನು ಹೃದಯಕ್ಕೆ ಹೊಲಿಸುತ್ತೇವೆ. ವಿಚಿತ್ರ ಆದರೆ ಸತ್ಯ.
ನನ್ನ ಸ್ನೇಹಿತೆ ಹೇಳಿದ ಒಂದು ವಿಶ್ಲೇಷಣೆ ಚೆನ್ನಾಗಿತ್ತು. ಮನಸ್ಸನ್ನು ಹೃದಯಕ್ಕೆ ತೋರಿಸುವವರು ಭಾವ ಜೀವಿಗಳು; ಬುದ್ಧಿ ಎನ್ನುವವರು ವ್ಯವಹಾರಿಕ ಮಂದಿ (Practical).
ಅದು ಅವಳ ವ್ಯಾಖ್ಯಾನ ...
ನೀವೇನಂತೀರಾ ಮನಸ್ಸು ಹೃದಯವೋ ಇಲ್ಲ ಬುದ್ದಿಯೋ !!!
ಈ ಚರ್ಚಾವಿಷಯ ಬಹಳ ಮುಂಚಿತವಾಗೆ ನಿಮ್ಮ ಹಾಗು ನಿಮ್ಮ ಸ್ನೇಹಿತರ ಹರಟೆಯಲ್ಲಿ ಬಂದಿರಬಹುದು.
ನನಗೆ ಎದುರಾಗಿದ್ದು ಇದೆ ಮೊದಲು.
ನಿಮ್ಮ ಅಭಿಪ್ರಾಯ,ಅನಿಸಿಕೆ,ಟೀಕೆ,ಟಿಪ್ಪಣಿಗಳಿಗೆ ಸ್ವಾಗತ ...

Subscribe to:
Comments (Atom)