Tuesday, April 24, 2012

"ಮುಂಗಾರು ಮಳೆ... "

ಹೇ ವರುಣನೆ!!!
ನಿನ್ನಲ್ಲಿ ಹೀಗೊಂದು ಮೊರೆ ....
ಪೋಣಿಸು ಮೇಘಗಳ ಮಾಲೆಯನ್ನು
ಅಲಂಕರಿಸು ಭೂರಮೆಯ ಕೊರಳನ್ನು ...

ತೀರದಾಗಿದೆ ಬರದ ಬವಣೆ
ಸಹಿಸಲಾಗದಾಗಿದೆ ಬೇಸಿಗೆಯ ಬೇನೆ
ಸಕಲ ಜೀವರಾಶಿಗಳು ನಿನ್ನಾಗಮನದ ನಿರೀಕ್ಷೆಯಲ್ಲಿವೆ ,
ಹರಸು ಸಕಲ ಚರಾಚರಗಳನ್ನು...
ಸುರಿಸು ಮುಂಗಾರು ಮಳೆಯನ್ನು...
ತುಂಬಿಸು ಬರಿದಾಗಿರುವ ನದಿ-ಹಳ್ಳ-ತೊರೆಗಳ ಒಡಲನ್ನು....

ನಿನ್ನಿಂದಲೇ ಮನಸ್ಸಿಗೆ ಉಲ್ಲಾಸ
ನಯನಗಳಿಗೆ ಹಸಿರಿನ ಸಂತಸ
ಆರ್ಭಟ ನೆಡಸದಿರು ಅತಿವೃಷ್ಟಿಯಾಗಿ
ಶಪಿಸದಿರು ಅನಾವೃಷ್ಟಿಯಾಗಿ
ಸುರಿಸು ಸರಿ ಪ್ರಮಾಣದ ಮಳೆ...
ತರಿಸು ಸುಗ್ಗಿಯ ಹೊಳೆ ....   

Sunday, April 22, 2012

"ನನ್ನಿಭಿಮಾನ"

ಪ್ರಾಯಶಃ "ಅಂತರಾಳ" ವನ್ನು ಹುಟ್ಟು ಹಾಕಿದ ಮೇಲೆ ಅದನ್ನು ನೋಡುವ ನನ್ನೆಲ್ಲ ಸ್ನೇಹಿತರಿಗೆ ಅನ್ನಿಸಿರಬಹುದು ವಿನಯ್ ಏಕೆ ಇನ್ನು "ಆ" ವ್ಯಕ್ತಿಯ ಬಗ್ಗೆ ಬರೆದಿಲ್ಲ ಎಂದು. ಆ ವ್ಯಕ್ತಿಯ ಬಗ್ಗೆ ಬರೆಯಲು ಏಪ್ರಿಲ್ ಗಿಂತ ಒಳ್ಳೆಯ ತಿಂಗಳಿಲ್ಲ ಎಂಬುದು ನನ್ನ ಭಾವನೆ...
ಹೌದು .... ಕನ್ನಡ ಕುಲಕೋಟಿಯ ಆರಾಧ್ಯ ದೈವ,ನಟ ಸಾರ್ವಭೌಮ,ಕರ್ನಾಟಕ ರತ್ನ,ನನ್ನ ನೆಚ್ಚಿನ ನಟ,ವರ ನಟ ಡಾ//ರಾಜಕುಮಾರ್ ಬಗ್ಗೆಯೇ ಈ ಲೇಖನ.. ಇಂಜಿನಿಯರಿಂಗ್ ಪದವಿ ಶಿಕ್ಷಣದಲ್ಲಿದಾಗ ನಮ್ಮ ಗಣಕಯಂತ್ರ ವಿಭಾಗದ ಸಂಚಿಕೆಯಲ್ಲಿ ಕನ್ನಡದಲ್ಲಿ ಲೇಖನ ಬರೆಯುವ ಸದಾವಕಾಶ ದೊರೆತಿತ್ತು. ಆಗ ರಾಜ್ ಬಗ್ಗೆ ಬರೆದಿದ್ದೆ.. ಆಗ ನನ್ನ ಪದ, ಭಾವನೆಗಳಿಗಿಂತ ಮಿಗಿಲಾಗಿ ಮಾಡಿದ್ದು Collection and editing :) 


ರಾಜ್ ವ್ಯಕ್ತಿತ್ವದ ಬಗ್ಗೆ ನಾನು ಇಲ್ಲಿ ಬರೆಯುತ್ತಿಲ್ಲ...ಅದನ್ನು ಅವರ ಮಗ ಪುನೀತ್ ಮಾಡುತಿದ್ದಾರೆ :) . Yes, Even i am looking forward for the book "ರಾಜ್ - ವ್ಯಕ್ತಿತ್ವದ ಹಿಂದಿನ ವ್ಯಕ್ತಿ " by appu ... ಅವರ ಬಗ್ಗೆ ಓದಿರುವ ಅಥವಾ ಕೇಳಿ ತಿಳಿದಿರುವ ಸಂಗತಿಗಳನ್ನೇ ಅನೇಕ ಲೇಖನಗಳನ್ನಾಗಿ ಪರಿವರ್ತಿಸಬಹುದು... I wont do that here don t worry :) I am writing only from the perspective "Raj as an actor".

ಜೀವನದಲ್ಲಿ ಓದೇ ಮಾನದಂಡವಲ್ಲ ... ಓದದೆ ಎಷ್ಟು ಎತ್ತರಕ್ಕೆ ಬೇಕಾದರೂ ಹೋಗಬಹುದು ಎಂಬುದರ ಸ್ಪಷ್ಟ ನಿದರ್ಶನ ರಾಜ್..
ಆದರೆ ಮಾಡುವ ಕಾಯಕದಲ್ಲಿ ಶ್ರದ್ದೆ ಇರಬೇಕು...Involvement,Dedication,simplicity,hard work,respect-love ಈ ಎಲ್ಲ ಗುಣಗಳು ಆ ವ್ಯಕ್ತಿಯಲ್ಲಿ ಮೈಗೂಡಿದ್ದರಿಂದಲೇ ಆತ "ಗಾಂಧಿನಗರ"ದಲ್ಲಿ "ಸಾರ್ಥಕ ಸುವರ್ಣ " ಆಚರಿಸಿಕೊಂಡಿದ್ದು ....

ಒಬ್ಬ ವ್ಯಕ್ತಿ ತನ್ನ ಚಲನಚಿತ್ರದ ಅಭಿನಯದಿಂದ ಪತನದಲ್ಲಿದ್ದ ಪದವಿಧರರನ್ನು ಹಳ್ಳಿಗಳಿಗೆ ಮರಳಿ ವ್ಯವಸಾಯ ಮಾಡಲು ಪ್ರೇರೆಪಿಸಬೇಕಾದರೆ.ಒಂದು ಚಿತ್ರದಿಂದ ಮಧ್ಯಪಾನದ ವಿರುದ್ಧದದ ಚಳುವಳಿಗೆ ನಾಡಿ ಹಾಡಬೇಕಾದರೆ ಆತನಿಗಿದ್ದ ವ್ಯಾಪ್ತಿ,ಆತನಿಗಿದ್ದ ಶಕ್ತಿ ಎಂತಹದಿರಬಹುದು !!!! ಆತ ನಿಜವಾಗಿಯೂ "ಬಂಗಾರದ ಮನುಷ್ಯ"... ಆತನ ಜೀವನ ಸತ್ಯವಾಗಿಯೂ " ಜೀವನ ಚೈತ್ರ ". ಕನ್ನಡ ನಾಡಿನ ಮನೆ ಮನೆಗಳಲ್ಲಿ ಆತನ ಅಭಿಮಾನಗಳಿದ್ದಾರೆ. ಮಗನಲ್ಲದಿದ್ದರೆ ತಂದೆ;ತಂದೆಯಲ್ಲದಿದ್ದರೆ ತಾತ.... ಅಮ್ಮ-ಅಜ್ಜಿ ... ಇದ್ದೆ ಇರುತ್ತಾರೆ ..thats my bet !!! :) ಆತ ನಮನ್ನಗಲಿ ಆರು ಸಂವತ್ಸರಗಳೇ ಕಳೆದಿವೆ ... ಆದರು even today Raj is my favorite actor :)

ಆಡು ಮುಟ್ಟದ ಸೊಪ್ಪಿಲ್ಲ .. ಕುವೆಂಪು ಬರೆಯದ ಸಾಹಿತ್ಯ ಪ್ರಾಕಾರವಿಲ್ಲ...ಹಾಗೆಯೇ ಮುತ್ತುರಾಜ ಮಾಡದ ಪಾತ್ರವಿಲ್ಲ...
ಐತಿಹಾಸಿಕ,ಪೌರಾಣಿಕ, ಸಾಮಾಜಿಕ,ಸಾಂಸಾರಿಕ; ದ್ವಿ ಪಾತ್ರ,ತ್ರಿ ಪಾತ್ರ .... ಛೆ !!! ಎಲ್ಲದಕ್ಕೂ ಸೈ....
ದಾಸನಾಗಿ,ದೈವವಾಗಿ,ಸರ್ವರ್ ಆಗಿ,ಪೋಲಿಸ್ ಆಗಿ,ವಕೀಲನಾಗಿ,ಮನೆಯ ಯೆಜಮಾನನಾಗಿ, ಮೋಟೊರ್ ಬೈಕ್ rider ಆಗಿ , ಪ್ರೊಫೆಸರ್ ಆಗಿ, ಕಳ್ಳನಾಗಿ, ಫಾರೆಸ್ಟ್ range ಆಫೀಸೆರ್ ಆಗಿ, ರೈತನಾಗಿ,ಡ್ರೈವರ್ ಆಗಿ,ಮೀನುಗಾರನಾಗಿ, ಸಾಹುಕಾರನಾಗಿ,ಬಡವನಾಗಿ,ರಾಜನಾಗಿ,ಕವಿಯಾಗಿ,ಸೈನಿಕನಾಗಿ, ಮೇಯರ್ ಆಗಿ,ರಾಕ್ಷಸನಾಗಿ, ಪೆದ್ದನಾಗಿ,ಕಾರ್ಮಿಕನಾಗಿ, ಗಾಯಕನಾಗಿ, bond ಆಗಿ :) ಬಹುಶಃ ಅಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಿರುವ ಏಕೈಕ ನಟ ರಾಜ್... ಮೇಲಿನ ಪ್ರತಿಯೊಂದು ಪದ ಓದುವಾಗಲು ಒಂದೊಂದು ಚಲನ ಚಿತ್ರ ನೆನಪಾಗುತ್ತದೆ ಅಲ್ಲವೇ ... ?

ಶ್ರೀ ಕೃಷ್ಣದೇವರಾಯ,ಮಯೂರ,ಬಬ್ರುವಾಹನ,ಭಕ್ತ ಕುಂಬಾರ,ಶ್ರೀನಿವಾಸ ಕಲ್ಯಾಣ,ಬಂಗಾರದ ಮನುಷ್ಯ,ರವಿ ಚಂದ್ರ, ತ್ರಿಮೂರ್ತಿ,ದಾರಿ ತಪ್ಪಿದ ಮಗ,ಗಂದದ ಗುಡಿ,ಪಂಗಾರದ ಪಂಜರ,ಕಸ್ತುರಿನಿವಾಸ ,ಎರಡು ಕನಸು,ಆಕಸ್ಮಿಕ,ಒಡಹುಟ್ಟಿದವರುಪ್ರೇಮದ ಕಾಣಿಕೆ, ಕವಿರತ್ನ ಕಾಳಿದಾಸ,ಸನಾದಿ ಅಪ್ಪಣ್ಣ, ಹಾಲು ಜೇನು, ನಾ ನಿನ್ನ ಮರೆಯಲಾರೆ .. huh cant list them... Every movie is a Master Piece....
ರಾಜರುಗಳ ಇತಿಹಾಸವನ್ನು,ದೇವರ ಕಥೆಗಳನ್ನು ಈತನ ಚಿತ್ರಗಳಿಂದಲೇ ತಿಳುದುಕೊಂಡೆ ಎಂಬುದರಲ್ಲಿ ಎರಡು ಮಾತಿಲ್ಲ...
ರಾಜಕುಮಾರನ ಎಷ್ಟು ಚಿತ್ರಗಳನ್ನು ನೋಡಿದ್ದೇನೋ,ಎಷ್ಟು ಬಾರಿ ನೋಡಿದ್ದೇನೋ,ಗೊತ್ತಿಲ್ಲ...ಈಗಲೂ ನೋಡುತ್ತೇನೆ... ಏಕೆಂದರೆ ಅವಗಳಲ್ಲಿ ಒಂದು ಕಥೆ,ಮನೋಜ್ಞ ಅಭಿನಯ, ಜೀವನ ಅರ್ಥ, ಸಂದೇಶವಿರುತ್ತದೆ... 

ಎಲ್ಲ ಚಿತ್ರಗಳ ಮಧ್ಯೆ ಅದೇಕೋ "ಭಾಗ್ಯವಂತರು" ಚಲನಚಿತ್ರ ಮನಸಿಗ್ಗೆ ಸಮೀಪ...Why Special???
Probably ನಾನು ಅಪ್ಪ ಅಮ್ಮ ಕೂತು ಒಟ್ಟಾಗಿ ಅನೇಕ ಬಾರಿ ನೋಡಿರುವ ಚಿತ್ರ... ಅದರಲ್ಲೂ ನನ್ನ ತಂದೆ ರಾಜ್ ರ ಪಕ್ಕ ಅಭಿಮಾನಿ... ಅವರ ಜೊತೆ ಕೂತು ಆಗಿನ ಚಿತ್ರಗಳ ಬಗ್ಗೆ,ಚಿತ್ರ ಬಿಡುಗಡೆಯಾದಾಗ ಬಳ್ಳಾರಿಯಲ್ಲಿ ನೆಡದ ಘಟನೆಗಳನ್ನು ಕೇಳುವುದೇ ಒಂದು ಮಜಾ ... ಅವರ ಜೊತೆ ಮಾತಾಡಿ ಮಾತಾಡಿಯೇ ನಾನು ರಾಜ್ ಅಭಿಮಾನಿಯಾದೆನೇನೋ...ರಾಜ್ ತೀರಿಹೋದ ದಿನ ನನ್ನ ತಂದೆಗೆ ಅದೆಷ್ಟು ಫೋನ್ ಕಾಲ್ ಗಳು ಬಂದವೋ.. !!!!! ಈಗೀಗ ಮನೆಗೆ ಹೋದಾಗಲೆಲ್ಲ ರಾಜ್ ಚಿತ್ರ ಬಂದರೆ ತಂದೆ ಮಗ ಇಬ್ಬರು ಚಿತ್ರದ ಬಗ್ಗೆ ಮಾತನಾಡುತಾ,ವಿಮರ್ಶಿಸುತ್ತಾ ಕೂರುತ್ತೇವೆ...

ಈ ಚಿತ್ರವನ್ನು ನೋಡುವಾಗಲೆಲ್ಲ ಅನ್ನಿಸುವುದು ನಿರ್ದೇಶಕ ಎಲ್ಲೂ shot-ಕಟ್ ಹೇಳೇ ಇಲ್ಲವೆನ್ನೋ ಎಂಬುದು... ಯೌವನದಿಂದ ಮುಪ್ಪಿನವರೆಗೆ ನಿರರ್ಗಳ ಹರಿವು...Let this be my first movie review article too ;) 
ಪಾರ್ವತಿ - ಕುಮಾರ್ ....
ಬಡತನ ಕುಟುಂಬದ ಪಾರ್ವತಿಯನ್ನು ಪ್ರಾಮಾಣಿಕತೆಯನ್ನು ಮೆಚ್ಚಿ ಮದುವೆಯಾಗುವುದು ....
ಹೊಸಪೇಟೆಯ "ನಂದನ"ದಲ್ಲಿ ಚಿತ್ರಿತವಾಗಿರುವ "ನಿನ್ನ ಸ್ನೇಹಕೆ ನಾ ಸೋತುಹೋದೆನು ಗೀತೆ..."
ಪ್ರತಿಯೊಂದು ಪೈಸೆಗೂ ಲೆಕ್ಕ ಕೇಳಿ ಕೊನೆಗೆ ವಜ್ರದ ಹಾರವನ್ನು ಉಡುಗೊರೆಯಾಗಿ ಕೊಡುವ ಪತಿ... ಪತಿಯ ಭಾವನೆಗಳನ್ನು ಅರಿತು ನಡಿಯುವ ಸತಿ; ಸಾಮರಸ್ಯದ ಸಂಸಾರ...
ಸ್ನೇಹಿತ ಗುಂಡೂ ರಾವ್ ( ತೂಗುದೀಪ್) ಜೊತೆಗಿನ ಒಡನಾಟ,ಸಲಾಪ... ಗುಂಡು ನ್ಯಾಯಧೀಶನಾದರೆ ಕುಮಾರನ ಮನೆಯಲ್ಲಿ ಔತಣ ... ಕುಮಾರ್chamber of commerce president ಆದರೆ ಗುಂಡು ರಾವ್ ಮನೆಯಲ್ಲಿ ಔತಣ...Friends should be like that ಅಲ್ಲವೇ???
ಮಕ್ಕಳನ್ನು ಚೆನ್ನಾಗಿ ಬೆಳಸಬೇಕೆಂದು ಕಟ್ಟು ನಿಟ್ಟಿನ ತಂದೆಯಾಗುವುದು ... ತವರಿಗೆ ಹೋದ ಹೆಂಡತಿ ಹಿಂತುರಗದಿದ್ದಾಗ ವಿಚ್ಚೇದನ ಕಳಿಸುವ ಕೊಪಿಷ್ಟತನ,ಸತ್ತೆ ಹೋದಳೆಂದು ತಿಳಿದು ಆತ್ಮ ಹತ್ಯೆಗೆ ಪ್ರಯತ್ನಿಸುವ ಹೃದಯ ...ಮಕ್ಕಳಿಂದ "ಪಾರ್ವತಿ ಪ್ರಸಾದ" ವನ್ನು ಬಯಸುವ ನಿರೀಕ್ಷೆ ಎಲ್ಲವೂ ಸ್ವಾಭಾವಿಕ ...
ಮೂವರು ಮಕ್ಕಳು ಮೂರು ರೀತಿಯಲ್ಲಿ ತಂದೆಯ ಇಚ್ಚೆಗೆ ವಿರುದ್ದವಾಗಿ ನಡೆಕೊಳ್ಳುವುದು... ಅವರನ್ನು ನಿರ್ದಾಕ್ಷಿನ್ಯತೆ ಎಲವು ಸತ್ಯವೇನೋ ಎಂಬಂತೆ ಭಾಸವಾಗುತ್ತದೆ... ಮನೆಯ ಕೆಲಸಗಾರ "ಸತ್ಯ"ನ ಪ್ರಾಮಾಣಿಕತೆ... ಮಲ್ಲಿಗೆ ಹೂವಿನ ಪಾತ್ರ ;) ಡಾಕ್ಟರ ಆಗಿ ಬರುವ ಸಂಪತ್ .... ಎಲ್ಲ ಅಚ್ಚು ಕಟ್ಟು...
ಬರ ಸಿಡಿಲಂತೆ blood cancer ಗೆ ತುತ್ತಾಗುವ ಪಾರ್ವತಿ.. ಆತನ ಪ್ರತಿಕ್ರಿಯೆ .. ಗಂಡ ಹೆಂಡತಿಗೆ ತಿಳಿಯ ಬಾರದೆಂದು ಹೆಂಡತಿ, ತಿಳಿದಿದ್ದರೂ ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುವ ಬಗೆ.... " ನಿನ್ನ ನನ್ನ ಮನವು ಸೇರಿತು ... " ಗೀತೆ .. ಕೊನೆಗೆ ತನ್ನ ಅಹಂಕಾರಕ್ಕೆ ಕೊಲ್ಲಿ ಇಟ್ಟು ತಾಯಿ ಹೃದಯಕ್ಕಾಗಿ ಮಕ್ಕಳ ಮುಂದೆ ಬೇಡಿ ಕರೆತಂದು ... ಪಾರ್ವತಿಯ ಮುಂದೆ ಹಳೆಯ ಕುಮಾರ್ ನಂತೆ ಒಂದು ರೀತಿ, ಸೊಸೆಯ ಬಳಿ ಒಂದು ರೀತಿ ನಟಿಸುವ ಕುಮಾರ್...
ಈ ಚಿತ್ರದಲ್ಲಿ ಕುಮಾರನ ಸೊಸೆಯಾಗಿ ಬರುವ ಪಾತ್ರ ಹೆಚ್ಚು ಇಷ್ಟ... ಆಕೆ ಕ್ಲಬ್ ನರ್ತಕಿಯ ಮಗಳಾಗಿ ಪರಿಚಯವಾದರೂ she meets every expectation of Kumar The head of the family....
ತಿಪ್ಪೆಗೆ ಎಸೆದರು ತಪ್ಪದೆ ಲೆಕ್ಕ ಇದು ಅಂದಿದ್ದಾರೆ ದೊಡ್ಡೋರು ಅನ್ನುವ ಆಕೆಯ ಡೈಲಾಗ್ ... Thank you grand father of my child ಎನ್ನುವ ಆಶೋಕನ ಡೈಲಾಗ್ ;) ಇಷ್ಟ...
ಕೊನೆಯ ಶೀರ್ಷಿಕೆ ಗೀತೆ ಕಣ್ಣುಗಳನ್ನು ಒದ್ದೆ ಮಾಡದೆ ಇರುವುದಿಲ್ಲ... ಆದರೆ ಕೊನೆಯಲ್ಲಿ ಇಬ್ಬರು ಸಾಯುವ ರೀತಿ ಮನಸ್ಸಿಗೆ ಖೇದವನ್ನು ಉಂಟುಮಾಡುತ್ತದೆ....
ಪದ್ಮಶ್ರೀ ಬಿ ಸರೋಜ ದೇವಿಯ ಅಭಿನಯವು ಅಮೋಘ...
ಭಾಗ್ಯವಂತರು ಒಂದು ಸುಂದರ ಸರಳ ಸಾಂಸಾರಿಕ ಚಿತ್ರ... ನೀವು ಚಿತ್ರವನ್ನು ನೋಡಿಲ್ಲವೆಂದರೆ ಈ ಲೇಖನವನ್ನು ನಿಮ್ಮ ತಂದೆ ತಾಯಿಗೆ ತೋರಿಸಿ they will recollect the movie.. :)
ಆತ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ; ಯೌವನದಲ್ಲಿದ್ದರು ವೃದಾಪ್ಯದ ಪಾತ್ರ ಮಾಡಿದ ರಾಜಕುಮಾರ್ ಎಂದು ದ್ವಾರಕೀಶ್ ಯಾವುದೊ ಕಾರ್ಯಕ್ರಮದಲ್ಲಿ ಹೇಳಿದ್ದರು ....

ನನ್ನ ತಾಯಿಯ ತಾಯಿ ಕಸ್ತೂರಿ ನಿವಾಸ ಚಲಚಿತ್ರವನ್ನು ನೋಡಿ ಏಳು ದಿನ ಜ್ವರ ಬಂದು ಮಲಗಿದ್ದರಂತೆ...ಅದೊಂದು ಕೇವಲ ಕಥೆ ಆದರು ಆತನ ನಟನೆ ಬೀರುತಿದ್ದ ಪ್ರಭಾವ ಅಂತದ್ದು ... ನಮ್ಮೊರಿನ ಒಬ್ಬ ಅಜ್ಜಿ ರಾಜಕುಮಾರ್ ಸತ್ತನೆಂದು ತಿಳಿದನಂತರ ಆತನ ಮಣ್ಣಾಗುವ ವರೆಗೆ ಒಂದು ಹನಿ ನೀರು ಸಹ ಕುಡಿದಿರಲಿಲ್ಲವಂತೆ...

ಆತನ ಪ್ರತಿಯೊಂದು ಚಲನಚಿತ್ರವೂ ಒಂದೊಂದು ವಿಮರ್ಶಾ ಲೇಖನವಾಗಬಹುದು ...
ಆ ಕಣ್ಣಿನ ಭಾವ , ಆ ಸಂಭಾಷಣೆ, ಆ ಸಿರಿ ಕಂಠ .....
ರಾಜಕುಮಾರ್ ಗೆ ರಾಜಕುಮಾರ್ ನೆ ಸಾಟಿ ... ಕನ್ನಡಕೊಬ್ಬನೇ ರಾಜಕುಮಾರ್...  

ನನಗೆ ಆತನ ಸಹಸ್ರಾರು ಗೀತೆಗಳಲ್ಲಿ ಹಲವಾರು ಇಷ್ಟ ... ಅದರಲ್ಲೂ ಆಕಸ್ಮಿಕ ದ " ಬಾಳುವಂತ ಹೂವೆ ಬಾಡುವಾಸೆ ಏಕೆ ..ಅಚ್ಚು ಮೆಚ್ಚು .. It Inspires...
ಗಂಧದ ಗುಡಿಯಲ್ಲಿ ಆತ ಆನೆಯ ದಂತವನ್ನು ಇಡಿದು ಓಲಾಡುವ ದೃಶ್ಯ.. ಕಾಳಿದಾಸನಾಗಿ ಕನಕಾಭಿಷೆಕವನ್ನು ಪಡೆಯುವ ದೃಶ್ಯ ಅತಿ ಇಷ್ಟ... they all are classic... ಅಲ್ವಾ?

ಈಗಲೂ ಆತನ ಚಿತ್ರಗಳ ಬಗ್ಗೆ ಸ್ನೇಹಿತರ ಬಳಿ ಮಾತನಾಡುತ್ತೇನೆ... ಎಷ್ಟೊಂದು ಜನಕ್ಕೆ ಆ ಚಿತ್ರ ಬರುತಿದ್ದೆ ನೋಡಿ ಈ ಚಿತ್ರ ಬರುತಿದ್ದೆ ನೋಡಿ ಎಂದು ಸಂದೇಶಗಳನ್ನು ಕಳಿಸಿ ಕಾಟವನ್ನು ಕೊಡುತ್ತೇನೆ... ಆದರೂ when they say hey i saw the movie and liked that because of you ಎಂದು ಹೇಳಿದಾಗ ಸಂತೋಷ, ಖುಷಿ ...

ಅಭಿಮಾನ ಪೂರ್ವಕವಾಗಿ ....
ಡಾ//ರಾಜ್ ನೆನಪಲಿ .....