Thursday, August 09, 2012

ಬದುಕು ನಿರಂತರ .... ವಯಸ್ಸಿನ ಎಲ್ಲೇ ಮೀರಿ....

೬೦ ಕ್ಕೆ ಅರಳು ಮರಳು !!!! ಯಾರು ಹೇಳಿದ್ದು :)



ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ;) ಅನ್ನುವ ನಮಂತಹ ಅಲೆಮಾರಿ ಜೀವಗಳಿಗೆ ಮೊದಲು ಎದುರಾಗುವ ಯೋಚನೆ ಸೂರು (ಮನೆ) !!!
ಹೀಗೆ ಮಂಗಳೂರು ನನ್ನ ವೃತ್ತಿಯ ಸ್ಥಳ ಎಂದು ತಿಳಿದು ಬಂದಾಗ ನಮನ್ನು ಕಾಡಿದ ಕಷ್ಟ ಬಾಡಿಗೆ ಮನೆ ಹುಡುಕುವುದು ...
ಅದರಲ್ಲೂ ಈಗಿನ ರೆಟ್ಸ್ ಗಗನ ಚುಂಬಿ ಕಟ್ಟಡಗಳಂತೆ ... Unfurnished, semi-furnished,Furnished ಹೀಗೆ ವಿಧಗಳು...
ಅಲೆದು ಅಲೆದು ಬಕರಗಳಾಗಿ ಸ್ವಲ್ಪ ದುಡ್ಡು ಕಳೆದು ಕೊಂಡ ಮೇಲೆಯೇ Furnished ಮನೆಯ ವ್ಯಾಮೋಹ ಹೋಗಿ ಜ್ಞಾನೋದಯವಾದದ್ದು ...
ಅದೇನೆಂದರೆ ಸುಮಾರು ಒಂದು ಸಾವಿರದಲ್ಲಿ u can convert an unfurnished house to a furnished ones!!!!
yes... Thats the best thing about Mangalore...
ಮೂರ್ಖರ ಪೆಟ್ಟಿಗೆ,ತಂಗಳು ಪೆಟ್ಟಿಗೆ, ಅಗಸರ ಎರಡು ಪೆಟ್ಟಿಗೆ i meant TV,Refrigerator,washing machine,almairah ಅಷ್ಟೇ ಏಕೆ ಕುರ್ಚಿ ಟೇಬಲ್ ಗಳು ಸಹ !!! ನಿಮಗೆ ಏನು ಬೇಕೋ ಎಲ್ಲವೂ ಬಾಡಿಗೆಗೆ ದೊರೆಯುತ್ತದೆ..
ಊರು ಬಿಟ್ಟು ಮತ್ತೊಂದು ಊರಿಗೆ ಹೋಗುವಾಗ ಮಾರುವ ಗೋಜು ಇರುವುದಿಲ್ಲ. ಅಲ್ಲದೆ its cheap too!!!
ಮಂಗಳೂರಿನಲ್ಲಿ ನೆಲಸಿರುವ ಎಲ್ಲ ಮಂಗಳೂರಿನಲ್ಲದವರಿಗೆ ಈ ಜೋಡಿ ಪರಿಚಿತರಿರಬಹುದು ... ಶ್ರೀಮತಿ ಶ್ರೀ ಚಂದ್ರಶೇಖರ್ ... ( Things Chandrashekhar ) .
ವೃತಿಯಿಂದ ನಿವೃತಿಯಾಗುವಾಗ ಬಂದ ಹಣದಿಂದ ಇವರು ಒಂದು ವ್ಯಾಪಾರವನ್ನು ಶುರು ಮಾಡಿದರು.. ಮಂಗಳೂರು ಇನ್ಫೋಸಿಸ್ , ಬಿ ಎಸ್ ಫ್ ಮುಂತಾದ ಕಾರ್ಖಾನೆಗಳು ಬಂದ ನಂತರ ಇವರ ಬುದ್ದಿವಂತಿಗೆ ಕೈ ಹಿಡಿದು ವ್ಯಾಪಾರವು ವೃದ್ದಿಯಾಗಿದೆ .. ನಾ ಇಲ್ಲಿ ಹೇಳ ಹೇಳಬೇಕೆಂದಿರುವುದು ಅವರ ವ್ಯಾಪಾರದ ಜಾಣ್ಮೆಯನಲ್ಲ...
ಚಂದ್ರಶೇಖರ್ ರವರಿಗೆ ಸಕ್ಕರೆ ಖಾಯಿಲೆ ಬಂದು, ಕಣ್ಣಿನ ಆಪರೇಷನ್ ಆಗಿ ಇತ್ತೀಚಿಗೆ ಸ್ಟ್ರೋಕ್ ಸಹ ಆಗಿದೆ :(  ಆದರೆ ಇವರ ಧರ್ಮ ಪತ್ನಿ ವಯಸ್ಸು ೭೦ರ ಆಸು ಪಾಸಿರಬಹುದು ... ಸ್ವಲ್ಪವೂ ಎದೆಗುಂದದೆ ಮನೆಯನಲ್ಲದೆ ಶುರು ಮಾಡಿದ ಆ ವ್ಯಾಪಾರವನ್ನು ಮುನ್ನಡೆಸುತ್ತಿದ್ದಾರೆ ...    
ಅವರ Soft Skills ನಮಂತಹ ಸಾಫ್ಟ್ವೇರ್ ಅಭಯಂತರರು ನೋಡಿ ಕಲಿಯಬೇಕು ... ಕರಗಂಟೆಗೆ ಬರುವ ಎಲ್ಲ ಕರೆಗಳನ್ನು ಇವರೇ ನಿಭಾಯಿಸುವುದು ... ಅವರ ಬಳಿ ಪೂರೈಸಲು ಯಾವುದಾದರು ಸರಕು ಇಲ್ಲದಿದ್ದರೆ ಅದನ್ನು ತಿಳಿಸಿ ಆಗುವುದಿಲ್ಲ ಎಂದು ಹೇಳುವ ಬಗೆ ... Documentation.. ಆ ವಯಸಿನಲ್ಲಿ ಆ ತಾಳ್ಮೆ !!!! ನಾವುಗಳು ಕಲಿಯಬೇಕು...  ನಾನು ಮೂರು ತಿಂಗಳಿಗೊಮ್ಮೆ ಬಾಡಿಗೆ ಕೊಡಲು ಹೋದ ತಕ್ಷಣ ನಮ್ಮ ಮನೆ ವಿಳಾಸವನ್ನು ಸರಿಯಾಗಿ ಹೇಳಿ ನನ್ನ room mate ಹೆಸರನ್ನು ಸಹ ಹಾಗೆ ಹೇಳುತ್ತಾರೆ ..
ಅದರಲ್ಲೇನು ವಿಶೇಷ ಅನ್ನಿಸಬಹುದು.. ಆದರೆ ಅವರಿಗಿರುವ ಗಿರಾಕಿ ನಾನೊಬ್ಬನೇ ಅಲ್ಲವಲ್ಲ ..
ಬಾಡಿಗೆ ಕೊಡಲು ಹೋದಾಗಲೆಲ್ಲ ಆರಾಮಾಗಿ ಕುಳಿತು ಮಾತಾನಾಡೆ ಬರುತ್ತೇನೆ ..
ಅಂತಹ ಉತ್ಸಾಹಿ ಜೀವಗಳನ್ನು ನೋಡಿದರೆ ಏನೋ ಖುಷಿಯಾಗುತ್ತದೆ ... ಮೊನ್ನೆ ಹೀಗೆ ಹೋದಾಗ ನನಗೆ ಅನಿಸಿದನ್ನು "ನಿಮನ್ನು ನೋಡಿದರೆ ಖುಷಿಯಾಗುತ್ತದೆ ನೀವುಗಳು ಇತರರಿಗೆ ಮಾದರಿ ಎಂದೇ " ಅದಕ್ಕೆ ಅವರು ಮುಗುಳ್ನಕ್ಕರು ಅಷ್ಟೇ ...
ಜೀವನ ಉತ್ಸಾಹಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ... ಏನಂತೀರ ....