Tuesday, December 27, 2011

ಭಾವಾಂತರಂಗ .....

ಪ್ರಖ್ಯಾತ ಕಾದಂಬರಿಕಾರ ಭೈರಪ್ಪ ಹೇಳುವ ಮಾತು: " ಲೇಖಕನಿಗೆ ಸಿಗುವ ಅತ್ಯಂತ ದೊಡ್ಡ ಸನ್ಮಾನ,ಪ್ರಶಸ್ತಿ ಆತನ ಕೃತಿಯ ಉಳಿವು ... ಕೃತಿಯೊಂದು ತಲ ತಲಾಂದರದವರೆಗೆ ಪ್ರಸ್ತುತವೆನಿಸಿ ಮುಂದಿನ ಹಲವಾರು ಪೀಳಿಗೆಯವರು ಓದಿದಾಗ ಎಂದು ..."

ಈ ಮಾತು ಹಾಡುಗಳಿಗೂ ಅನ್ವಯವಾಗುತ್ತದೆ ಅಲ್ಲವೇ ???
"ಚೊಂಬೇಶ್ವರ","ಅಪ್ಪ ಲೂಸ ಅಮ್ಮ ಲೂಸ..." ಎಂದು ಗೀತೆಗಳು ಮೂಡುತ್ತಿರುವ ಈ ಕಾಲದಲ್ಲೂ "ಜೊತೆಯಲಿ ಜೊತೆ ಜೊತೆಯಲಿ..." "ನಗುವ ನಯನ ...." ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಸುಶ್ರಾವ್ಯ ಗೀತೆಗಳು ಇಂದಿಗೂ ಕರ್ಣಗಳಿಗೆ ಮುದ ನೀಡುತ್ತವೆ .. In fact even people of our generation like those songs... ಈಗಿನ ಚಿತ್ರಗಳಲ್ಲೂ ಕೆಲವು ಉತ್ತಮ ಹಾಡುಗಳು ಮೂಡಿ ಬರುತ್ತವೆ ಆದರೆ ವಿರಳ... ಅಂದ ಹಾಗೆ I am not opposite to new kind of songs but i like old ones more...

ಪ್ರತಿ ನಿತ್ಯ ಮನೆಯಿಂದ ಆಫೀಸಿಗೆ ಸುಮಾರು ಒಂದು ಗಂಟೆ ಪ್ರಯಾಣ .. ಹಾಡು ಕೇಳುವ ಗೀಳು..ಕೇಳಿದ ಚಿತ್ರಗೀತೆಗಳನ್ನೇ
ಕೇಳಿ ಕೇಳಿ ಬೇಜಾರಾಗಿತ್ತು... ಆಗ ಸ್ನೇಹಿತರಿಂದ ನನಗೆ ಇಷ್ಟವಾಗುವ collections ಸಿಕ್ಕಿತು ...

ಆ ಹಾಡುಗಳೇ ಹಾಗೆ... ಸುಮಧುರ ...ಅರ್ಥಗರ್ಭಿತ ...
ಹಾಡಿನ ಭಾವ ತಿಳಿಸುವ ಆಲಾಪ ...
ಕಿವಿಗೆ ಇಂಪೆನಿಸುವ ಕರ್ಕಶವಲ್ಲದ ಹಿನ್ನೆಲೆ ಸಂಗೀತ ... ಹೆಚ್ಹಾಗಿ ತಬಲಾ,ಕೊಳಲು,piano...
ಅಲ್ಲಿ ಗಾಯಕ-ಗಾಯಕಿಯ ಧ್ವನಿಯೇ ಪ್ರಧಾನ...
ಮನಸ್ಸು ದುಃಖದಲ್ಲಿದಾಗ ಶಕ್ತಿ ತುಂಬುವ ಚೈತನ್ಯ ಆ ಹಾಡುಗಳಿಗಿದೆ..
ಹೌದು ನಾನು ಹೇಳುತ್ತಿರುವುದು ಭಾವಗೀತೆಗಳ ಬಗ್ಗೆಯೇ ...

ರವಿಕಾಣದನ್ನು ಕಾಣುವ ಕವಿಯ ಕುಂಚದಲ್ಲಿ ಹಲವಾರು ಕವಿತೆಗಳು ಮೂಡುತ್ತವೆ . ಆ ಕವಿತೆಗಳಿಗೆ ಸೂಕ್ತ ಸಂಗೀತ ಸಂಯೋಜನೆಯಾದರೆ ಅದು ಹಲವು ಹೃದಯಗಳನ್ನು ಮುಟ್ಟುತ್ತದೆ. ಕವಿಗಳು ರಚಿಸಿರುವ ಹಲವು ಕವಿತೆಗಳು ಚಲನಚಿತ್ರ ಗೀತೆಗಳಾಗಿವೆ.
ಸೀತಾ ಚಿತ್ರದ " ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ ... "
ಹೊಸಬೆಳಕಿನ "ತೆರೆದಿದೆ ಮನೆ ಓ ಬಾ ಅತಿಥಿ ..."
ಬೆಳ್ಳಿ ಮೋಡಗಳು ಚಿತ್ರದ " ಮೂಡಲ ಮನೆಯ ಮುತ್ತಿನ ನೀರಿನ ..."
ಮಿಸ್ ಲೀಲಾವತಿಯ "ದೋಣಿ ಸಾಗಲಿ ಮುಂದೆ ಹೋಗಲಿ ..."
ಅಮೆರಿಕ ಅಮೇರಿಕಾದ " ಯಾವ ಮೋಹನ ಮುರಳಿ ಕರೆಯಿತೋ ..."
ಹೀಗೆ ಹಲವಾರು ; ಕವಿ ರಚಿಸಿದ ಆಶಕ್ಕೆ ಅನುಗುಣವಾಗಿ,ಕೆಲವೊಮ್ಮೆ ವಿರುದ್ದವಾಗಿ ಚಿತ್ರಗೀತೆಗಳಾಗಿವೆ... 
ಇನ್ನು ಕೆಲವು ಚಿತ್ರಗೀತೆಗಳಾಗಿಲ್ಲ.. ಏನೇ ಇರಲಿ ಕವಿ ರಚಿತ ಗೀತೆಗಳಿಗೆ ಮತ್ತೊಂದು ಸಂಯೋಜನೆ ಇರುತ್ತದೆ ..
ಸುಗಮ ಸಂಗೀತ ... ಅದೇ ಚೆಂದ ...

ದೀಪವು ನಿನ್ನದೇ ಗಾಳಿಯೂ ನಿನ್ನದೇ...
ಕರುಣಾಳು ಬಾ ಬೆಳಕೇ ...
ನೀ ನಿಲ್ಲದೆ ನನಗೇನಿದೆ ...
ನಿನ್ನ ಕಂಗಳ ಕೊಳದಿ ಬೆಳದಿಂಗಲಿಳಿದಂತೆ...
ಎಲ್ಲ ನಿನ್ನ ಲೀಲೆ ತಾಯೆ ... ಎಲ್ಲ ನಿನ್ನ ಮಾಯೆ ...
ಯಾವ ಮೋಹನ ಮುರಳಿ ಕರೆಯಿತೋ ...
ಎದೆ ತುಂಬಿ ಹಾಡಿದೆನು ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ ...
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ ...
ನಿನ್ನ ಪ್ರೇಮದ ಪರಿಯ ನಾ ನರಿಯೇ ಕನಕಾಂಗಿ ...
ಲೋಕದ ಕಣ್ಣಿಗೆ ರಾಧೆಯು ಕೂಡ ..
ನೀ ಹಿಂಗೆ ನೋಡಬ್ಯಾಡ ನನ್ನ...
ಹುಚ್ಚು ಕೋಡಿ ಈ ಮನಸ್ಸು ಅದು ಹದಿನಾರರ ವಯಸ್ಸು ...
ಎಲ್ಲೊ ಹುಡುಕಿದೆ ಇಲ್ಲದ ದೇವರ ...
ಮುಗಿಲ ಮಾರಿಗೆ ರಾಗ ರತಿಯಾ .. ನಜ ಏರಿತ್ತ ಆಗ ಸಂಜೆಯಾಗಿತ್ತಾ.  
ರಾಯರು ಬಂದರು ಮಾವನ ಮನೆಗೆ ...
ಶುಭ ನುಡಿಯೇ ಶಕುನದ ಹಕ್ಕಿ ಶುಭ ನುಡಿಯೇ ...
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ...
ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು ... all the above listed are my favorites...

ಸುಂದರ ಪದಗುಚ್ಹ , ಅಂತರಂಗದ ಮಧುರ ಭಾವ ...
ಹಾಡು ಮೂಡಿದ ಸಂದರ್ಭ ತಿಳಿದಿದ್ದರೆ ಹಾಡಿನ ಬಗ್ಗೆ ಮತ್ತೂ ಪ್ರೀತಿ, ಗೌರವ ...
Hats off to ಪ್ರೇಮ ಕವಿ ನರಸಿಂಹಸ್ವಾಮಿ,ಕುವೆಂಪು,ವೆಂಕಟೇಶ ಮೂರ್ತಿ,ಅಡಿಗ,ಶಿವರುದ್ರಪ್ಪ,ಬೇಂದ್ರೆ,ನಿಸಾರ್ ಅಹಮೆದ್,
ಮೈಸೂರು ಅನಂತಸ್ವಾಮಿ ಇನ್ನು ಹಲವರು .....

ಸುಗಮ ಸಂಗೀತದ ಬಗ್ಗೆ ಪ್ರಸ್ಥಾಪಿಸಿ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸದಿದ್ದರೆ ಔಚಿತ್ಯ ಪೂರ್ಣವಾಗುವುದಿಲ್ಲ ...

ಬೆಳ್ಳಿ ಕೂದಲು...ಅಚ್ಚು ಕಟ್ಟಾದ ಉಡುಗೆ...ಮಗುವಿನ ಉತ್ಸಾಹ... ಕಂಚಿನ ಕಂಠ.. ಹಾಡುವಾಗ ಅವರಿಗಿದ್ದ ಆ ತನ್ಮಯತೆ ...
ಆ ಗಾಯಕ ಭಾವಗೀತೆಗಳ ಲೋಕಕ್ಕೆ ಹೊಸ ಆಯಾಮ ತಂದುಕೊಟ್ಟ ಕಲಾವಿದ ...
ಸುಗಮ ಸಂಗೀತದ ಮೇರು ಪರ್ವತ...
ತರವಲ್ಲ ತಗಿ ನಿನ್ನ ತಂಬೂರಿ ಸ್ವರ... ಕೋಡಗನ ಕೋಳಿ ನುಂಗಿತ ... ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ... ಎಂದು ಹಾಡುತ್ತಾ ನಿಂತರೆ ಹುಚ್ಚೆದ್ದು ಕುಣಿಯದ ಶ್ರೋತ್ರುವಿಲ್ಲ...

ಹೌದು ನಾನು ಹೇಳುತ್ತಿರುವುದು ದಿವಂಗತ ಸಿ.ಅಶ್ವಥ್ ರವರ ಬಗ್ಗೆಯೇ ...

"ಕನ್ನಡವೇ ಸತ್ಯ" ಕಾರ್ಯಕ್ರಮದಿಂದ ಎಂ.ಡಿ.ಪಲ್ಲವಿ,ಸಂಗೀತ ಕುಲಕರ್ಣಿ ಮುಂತಾದ ನಮ್ಮ ನೆಲದ ಪತಿಭೆಗಳಿಗೆ ಹೊಸ ಬಾಳು ದೊರಕಿಸಿಕೊಟ್ಟ, ಸಂತ ಶಿಶುನಾಳ ಶರೀಫರ ತತ್ವ ಪದಗಳು...ಹಲವಾರು ಕವಿರತ್ನಗಳ ಕವಿತೆಗಳು ಸಾಮಾನ್ಯರಾದ 
ನಮ್ಮನ್ನು ತಲುಪಲು ಒಂದು ರೀತಿ ಅವರೇ ಕಾರಣವೆಂದರೆ ಅತಿಶಯೋಕ್ತಿಯೇನಲ್ಲ ...
ನೆಚ್ಚಿನ ಕಿರುತೆರೆಯ ನಿರ್ದೇಶಕ ಸೀತಾರಾಮ್ ರ ಎಲ್ಲ ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಆ ಧ್ವನಿಯಲ್ಲೇ ಮೂಡುತಿದ್ದವು.
ಮಾಯಾಮೃಗ, ಮನ್ವಂತರ,ಮುಕ್ತ ... ಅವುಗಳು ಸಹ ಒಂದು ಬಗೆಯ ಭಾವಗೀತೆಗಳೇ ...

ಒಮ್ಮೆ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಎದುರಾಗಿದ್ದು ಉಂಟು ... ಪದೇ ಪದೇ ಅವರನ್ನು ನೋಡಿದಾಗ ಒಂದು ಸಣ್ಣ ನಗೆ ಬೀರಿದರು. ನಾನು ನಗುವಿನಲ್ಲೇ ಪ್ರತ್ಯುತ್ತರ ಕೊಟ್ಟೆ. ದುರದೃಷ್ಟ ನನ್ನ ಬಳಿ ಪುಟ್ಟ ಕಾಗದವು ಇರಲಿಲ್ಲ.. ಅವರ ಹಸ್ತಾಕ್ಷರ ಪಡೆಯುವ ಅದೃಷ್ಟ ನನಗಿರಲಿಲ್ಲ..

ಡಿಸೆಂಬರ್ 29 .. ಅವರು ನಮ್ಮನ್ನು ಅಗಲಿ ಎರಡು ವರ್ಷಗಳೇ ಕಳೆದವು ....
ಆ ಚೇತನಕ್ಕೊಂದು ಸಲಾಂ ...

ಕನ್ನಡ,ಕನ್ನಡದ ಶಕ್ತಿ,ಕನ್ನಡದ ವ್ಯಾಪ್ತಿಯನ್ನು ಕನ್ನಡಿಗರಿಗೆ ತಲುಪಿಸುವ ಅಂತಹ ಜೀವಗಳು ಕನ್ನಡದಲ್ಲಿ ಮತ್ತೆ ಹುಟ್ಟಿ ಬರಲಿ ಎಂಬ ಆಶಯ.....